ಜರ್ಮನಿಯ ಜೈವಿಕ ರಸಾಯನವಿಜ್ಞಾನಿಯಾಗಿದ್ದ ಅಡಾಲ್ಫ್ ವಿಲ್‌ಹೆಲ್ಮ್ ಹೆರ್ಮನ್ ಕೊಲ್ಬೆಯವರು ೧೮೧೮ರ ಸೆಪ್ಟೆಂಬರ್ ೨೭ರಂದು ಗೊಟಿಂಗ್‌ಟನ್ ಹತ್ತಿರದ ಎಲ್ಲಿಶೌಸೆನ್ ಪ್ರದೇಶದಲ್ಲಿ ಜನಿಸಿದರು. ಕೊಲ್ಬೆಯವರು ದ್ವಿತೀಯಕ ಮತ್ತು ತೃತೀಯಕ ಅಲ್ಕೊಹಾಲ್‌ಗಳ ಅಸ್ತಿತ್ವವನ್ನು ಗುರುತಿಸಿದರು. ಮೇದಸ್ಸು-ಆಮ್ಲಗಳ ( ) ವಿದ್ಯುದ್ವಿಭಜನೆ ಮತ್ತು ಫಿನಾಲ್‌ನಿಂದ () ಸ್ಯಾಲಿಸಿಲಿಕ್ ಆಮ್ಲಗಳ ( ) ತಯಾರಿಕೆ ಕೊಲ್ಬೆಯವರ ಪ್ರಮುಖವಾದ ಪ್ರಾಯೋಗಿಕ ಕೆಲಸಗಳಾಗಿವೆ. ಅವರು ಉಪಯೋಗಿಸಿದ ತಂತ್ರಕ್ಕೆ ‘ಕೊಲ್ಬೆ ಪರಿಣಾಮ’ ಎನ್ನಲಾಗಿದೆ. ಅದು ಮುಂದೆ ಜನಪ್ರಿಯ ಔಷಧವಾದ ‘ಆಸ್ಪಿರಿನ್’ ತಯಾರಿಕೆಗೆ ಮತ್ತು ಕೊಲ್ಬೆಯವರು ತಯಾರಿಸಿದ ನೈಟ್ರೊಮೀಥೇನ್‌ಗೆ ನಾಂದಿಯಾಯಿತು. ನೈಟ್ರೈಲ್‌ಗಳನ್ನು () ಮೇದಸ್ಸು-ಆಮ್ಲಗಳಾಗಿ ಪರಿವರ್ತಿಸುವ ಕೆಲಸವನ್ನು ಕೊಲ್ಬೆಯವರು ಮಾಡಿದರು. ಆಲ್‌ಡಿಹೈಡ್‌ಗಳು ಮತ್ತು ಕೆಟೋನ್‌ಗಳ () ನಡುವಿನ ಸಂಬಂಧವನ್ನು ಕೊಲ್ಬೆಯವರು ವಿವರಿಸಿದರು. ಹಾಗೆಯೇ ‘ಕಾರ್ಬೊನಿಲ್ ಗುಂಪು’ ( ) ಎಂಬ ಹೊಸ ಗುಂಪಿನ ಪದಾರ್ಥಗಳನ್ನು ಕಂಡುಹಿಡಿದರು. ಕೊಲ್ಬೆಯವರು ೧೮೮೪ರ ನವೆಂಬರ್ ೨೫ರಂದು ಲೀಪ್‌ಝಿಗ್‌ನಲ್ಲಿ ನಿಧನರಾದರು. == ಉಲ್ಲೇಖಗಳು ==